ಸ್ವಾತಂತ್ರ್ಯಾನಂತರ ದೇಶ ಪ್ರಗತಿ
"ಸ್ವಾತಂತ್ರ್ಯಾನಂತರ ದೇಶ ಪ್ರಗತಿ"
ಗದಗ: ಸ್ವಾತಂತ್ರ್ಯ
ನಂತರ ದೇಶ ಅದ್ಭುತವಾದ ಪ್ರಗತಿ ಸಾಧಿಸಿದ್ದು, ವಿಶ್ವವೇ ನಮ್ಮತ್ತ ನೋಡುವಂತಾಗಿದೆ ಎಂದು
ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 65ನೇ ಗಣರಾಜ್ಯೋತ್ಸವ ಕಾರ್ಯಕ್ರಮಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಜಗತ್ತೇ
ಮೆಚ್ಚುವಂತಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವೆಲ್ಲಾ ಹೊಂದಿದ್ದೇವೆ ಎನ್ನುವುದೇ
ನಮ್ಮಗೆಲ್ಲಾ ಸೌಭಾಗ್ಯದ ವಿಷಯವಾಗಿದೆ. ಅಂತಹ ಸಂವಿಧಾನವನ್ನು ರೂಪಿಸುವಲ್ಲಿ ಡಾ.
ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಹಲವಾರು ಜನರ ಶ್ರಮವಿದೆ. ಅದರ ಫಲವಾಗಿಯೇ
ನಾವಿಂದು ನೆಮ್ಮದಿಯ ಬದುಕು ಕಳೆಯುತ್ತಿದ್ದೇವೆ ಎಂದರು. 32 ನಿಮಿಷಕ್ಕೂ ಹೆಚ್ಚು
ಕಾಲ ಸುದೀರ್ಘವಾದ ಭಾಷಣ ಮಾಡಿದ ಸಚಿವರು ಸರ್ಕಾರ ಸಾರ್ವಜನಿಕರ ಶ್ರೇಯೋಭಿವೃದ್ಧಿಗೆ
ಹಾಕಿಕೊಂಡ ಕಾರ್ಯಕ್ರಮಗಳ ಬಗ್ಗೆ ಹಾಗೂ ಗದಗ ಜಿಲ್ಲೆಗೆ ಅನುಷ್ಠಾನವಾಗಿರುವ ವಿಶೇಷ
ಯೋಜನೆಗಳು ಮತ್ತು ಅದಕ್ಕಾಗಿ ಬಿಡುಗಡೆಯಾದ ಅನುದಾನ ಕುರಿತು ವಿವರಿಸಿದರು.ವಿಶೇಷತೆ:
ದೇಶಭಕ್ತಿ, ಸರ್ವಧರ್ಮೀಯರ ಹಾಗೂ ದೇಶದ ಏಕತೆ ಸಾರುವ ಹಿಂದಿ ಹಾಗೂ ಕನ್ನಡ ಚಲನಚಿತ್ರದ
ಗೀತೆಗಳ ಹಾಡಿಗೆ ತಕ್ಕಂತೆ ನೂರಾರು ಶಾಲಾ ವಿದ್ಯಾರ್ಥಿಗಳ ಹೆಜ್ಜೆ. ಸುತ್ತಲೂ ಸಾವಿರಾರು
ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಂಭ್ರಮ. ಜಿಲ್ಲೆಯ ಜನತೆಯ ದೂರು ದುಮ್ಮಾನಗಳ
ಕನ್ನಡಿಯಾಗಿ ಮೂಡಲಿರುವ ಜಿಲ್ಲಾಡಳಿತ ವೆಬ್‌ಸೈಟ್ ಉದ್ಘಾಟನೆ. ವಿವಿಧ ರಂಗಗಳಲ್ಲಿ ಉತ್ತಮ
ಕಾರ್ಯನಿರ್ವಹಿಸಿದವರಿಗೆ ಹಾಗೂ ರಾಜ್ಯ ಸರ್ಕಾರದಿಂದ ಅಧಿಕಾರಿ, ಸಿಬ್ಬಂದಿಗೆ ನೀಡುವ
ಸರ್ವೋತ್ತಮ ಪ್ರಶಸ್ತಿ. ಪರೇಡ್ ಕಮಾಂಡ್ ಟಿ. ಪೈಜುದ್ದೀನ ಅವರ ನೇತೃತ್ವದ ಆಕರ್ಷಕ
ಶಿಸ್ತಿನ ಪಥ ಸಂಚಲನ. ಜತೆಗೆ ಪೊಲೀಸ್ ಬ್ಯಾಂಡ್ ಸಂಗೀತ ಇದು ಗಣರಾಜ್ಯೋತ್ಸವ ಸಮಾರಂಭದ
ವಿಶೇಷತೆಯಾಗಿತ್ತು.ಪಾಲ್ಗೊಂಡವರು: ಪಥ ಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು
ಪಡೆ, ನಾಗರಿಕ ಪೊಲೀಸ್ ಪಡೆ, ಹೋಮ್‌ಗಾರ್ಡ್ಸ್, ವಿ.ಡಿ.ಎಸ್.ಟಿ.ಸಿ ಗಂಡು ಹಾಗೂ
ಹೆಣ್ಣುಮಕ್ಕಳ ಹೈಸ್ಕೂಲ್, ಎನ್.ಸಿ.ಸಿ. ಸೀನಿಯರ್ ಹಾಗೂ ಜ್ಯೂನಿಯರ್, ಸಿ.ಎಸ್. ಪಾಟೀಲ
ಪ್ರಾಥಮಿಕ ಶಾಲೆಯ ಸ್ಕೌಟ್ಸ್, ಸಿಡಿಒ ಜೈನ್ ಪ್ರಾಥಮಿಕ ಶಾಲೆಯ ಗೈಡ್ಸ್, ಸರ್ಕಾರಿ ಗಂಡು
ಮಕ್ಕಳ ಪ್ರೌಢಶಾಲೆ ಸಂ. 12, ಎಚ್.ಪಿ.ಕೆ. ಬಿ.ಎಸ್. ಶಾಲೆ ನಂ. 19ರ ಹಾಗೂ ಎಸ್.ಎಂ.ಕೆ
ನಗರ ಸರ್ಕಾರಿ ಪ್ರೌಢಶಾಲೆಯ ಭಾರತ ಸೇವಾ ದಳ, ವೆಂಕಟೇಶ್ವರ ಪ್ರೌಢಶಾಲೆ, ಸಿದ್ಧಲಿಂಗನಗರದ
ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.ಸಮಾರಂಭದಲ್ಲಿ
ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಡಿಸಿ ಎನ್.ಎಸ್.
ಪ್ರಸನ್ನಕುಮಾರ್, ಎಸ್ಪಿ ಡಾ. ಶರಣಪ್ಪ ಎಸ್.ಡಿ, ಜಿಪಂ ಇಸಿಒ ವೀರಣ್ಣ ತುರಮರಿ, ತಾಪಂ
ಅಧ್ಯಕ್ಷ ಹನುಮಪ್ಪ ಇಂಗಳಹಳ್ಳಿ, ಎಪಿಎಂಸಿ ಅಧ್ಯಕ್ಷ ಡಿ.ಆರ್. ಪಾಟೀಲ ಮುಂತಾದವರು
ಪಾಲ್ಗೊಂಡಿದ್ದರು. ನಾಡಗೀತೆಗೆ ಅಗೌರವಧ್ವಜಾರೋಹಣ ನೆರವೇರಿ, ನಾಡಗೀತೆ
ಹಾಡುತ್ತಿದ್ದ ಸಂದರ್ಭದಲ್ಲಿ ಬಂದ ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನ, ಕನಿಷ್ಠ ನಾಡಗೀತೆ
ಮುಗಿಯುವವರೆಗೂ ನಿಂತು ವೇದಿಕೆಗೆ ಬರದೇ, ನಾಡಗೀತೆ ಪ್ರಾರಂಭವಿದ್ದ ಸಂದರ್ಭದಲ್ಲಿಯೇ
ಅವಸರವಾಗಿ ವೇದಿಕೆಗೆ ಬಂದರು. ಅಲ್ಲಿ ಕೂಡಾ ಅವರಿಗೆ ಎಲ್ಲಿ ನಿಲ್ಲಬೇಕು ಎನ್ನುವ ಗೊಂದಲ
ಉಂಟಾಗಿ, ಒಮ್ಮೆ ಸಚಿವರ ಹಿಂದೆ, ಮತ್ತೊಮ್ಮೆ ಎಸ್ಪಿ ಅವರ ಹಿಂದೆ ಹೀಗೆ ತಡಬಡಾಯಿಸಿದರು.
ಕೊನೆಗೆ ನಾಡಗೀತೆ ಮುಗಿವ ವೇಳೆಗೆ ಜಿಪಂ ಸಿಇಒ ಅವರ ಬಳಿ ಬಂದು ನಿಂತುಕೊಂಡರು.
No comments:
Post a Comment