Thursday, November 26, 2015

Thoremane shivaraju tr

ಹೊಯ್ಸಳರು  "ಶಿವರಾಜು ತೊರೆಮನೆ"


ಕಲ್ಯಾಣಿ ಚಾಲುಕ್ಯರು
ಪ್ರಸ್ತಾವನೆ
ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊಣೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
ಇವರನ್ನು ಪಶ್ಚಿಮದ ಚಾಲುಕ್ಯರೆಂದು ಕರೆಯುವರು
ಇವರ ಪ್ರಾರಂಭದ ರಾಜಧಾನಿ - ಏತಗಿರಿ ಅಥವಾ ಪೊಟ್ಟಳಕೆರೆ ಹಾಗೂ ಮಹಾರಾಷ್ಟ್ರದ ಮಾನ್ಯಖೇಟ
ಇವರ ಲಾಂಛನ - ವರಾಹ
ರಾಷ್ಟ್ರಕೂಟರ ಸಾಮಂತರಾಗಿದ್ದ ಎರನೇ ತೈಲಪ - ಈ ಮನೆತನದ ಮೂಲ ಪುರುಷ
ತೈಲಪ ಎರಡನೇ ಕರ್ಕನನ್ನ ಸೋಲಿಸಿ ಈ ರಜ್ಯಾಕ್ಕೆ ತಳಹದಿ ಹಾಕಿದನು

ಆಧಾರಗಳು
ರನ್ನನ ಅಜಿತನಾಥಪುರಾಣ ಮತ್ತು ಗದಾಯುದ್ಧ
ಮೂರನೇ ಸೋಮೇಶ್ವರನ - ಮಾನಸೋಲ್ಲಾಸ
ಬಿಲ್ಹಣನ - ವಿಕ್ರಮಾಂಕದೇವ ಚರಿತಾ
ವಿಜ್ಞಾನೇಶ್ವರನ - ಮಿತಾಕ್ಷರ

ರಾಜಕೀಯ ಇತಿಹಾಸ
ಎರಡನೇ ತೈಲಪ
ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ
ಮಾನ್ಯಖೇಟ ಈತನ ರಾಜಧಾನಿ
ಕ್ರಿ.ಶ.997 ರಲ್ಲಿ ಮರಣ ಹೊಂದಿದ

ಆರನೇ ವಿಕ್ರಮಾಧಿತ್ಯ
ಕಲ್ಯಾಣಿ ಚಾಲುಕ್ಯರ ಅತ್ಯಂತ ಪ್ರಸಿದ್ದ ದೊರೆ
ಈತ 09/03/1076 ರಲ್ಲಿ “ ಚಾಲುಕ್ಯ ವಿಕ್ರಮ ಶಕೆ ” ಎಂಬ ಹೊಸ ಶಕೆಯನ್ನ ಸ್ಥಾಪಿಸಿದ
ಈತನಿಗೆ ಭವನೈಕ್ಯಮಲ್ಲ ಮತ್ತು ಪೆರ್ಮಾಚಿದೇವ ಎಂಬ ಬಿರುದಿತ್ತು
ಈತನ ದಂಡ ನಾಯಕನ ಹೆಸರು - ಅಚ್ಚುಗಿ
ಕರ್ನಾಟಕ ಸರಸ್ವತಿ ಎಂದು ಪ್ರಸಿದ್ದರಾದವರು - ಚಂದ್ರಲಾದೇವಿ
ಬಳ್ಳಿಗಾಂವೆ ಈತನ ಕಾಲದ ಪ್ರಸಿದ್ದ ವಿಧ್ಯಾ ಕೇಂದ್ರ
ಈತ “ವಿಕ್ರಮ ಪುರ ” ಎಂಬ ನಗರವನ್ನು ನಿರ್ಮಿಸಿದ ನು
“ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿರುವ ದೇವಾಲಯ “ ಇಟಗಿಯ ಮಹಾದೇವಾ ದೇವಾಲಯ ” .
“ ಇಟಗಿಯ ಮಹಾದೇವಾ ದೇವಾಲಯ ” ಇದರ ನಿರ್ಮಾತೃ ಈತನ ದಂಡ ನಾಯಕ - ಮಹಾದೇವಾ ( ದಂಡಾದೀಶ )
ಈತ ಕ್ರಿ.ಶ.1026 ರಲ್ಲಿ ಮರಣ ಹೊಂದಿದನು

ಮೂರನೇ ಸೋಮೇಶ್ವರ :-
6 ನೇ ವಿಕ್ರಮಾಧಿತ್ಯನ ನಂತರ ಅಧಿಕಾರಕ್ಕೆ ಬಂದನು
ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ ಈತನ ಕೃತಿಗಳು
ಮಾನಸೋಲ್ಲಾಸದ ಇನ್ನೊಂದು ಹೆಸರು - “ಅಭಿಲಾಷಿತಾರ್ಥ ಚಿಂತಾಮಣಿ ”
“ಅಭಿಲಾಷಿತಾರ್ಥ ಚಿಂತಾಮಣಿ ” ಇದರ ಪ್ರತಿಯನ್ನು ಮೂರು ಭಾಗಗಳಾಗಿ ಪ್ರಕಟಿಸಿದ ಸಂಸ್ಥೆಯ ಹೆಸರು “ ಬರೋಡದ ಗಾಯಕವಾಡ್ ಓರಿಯಂಟಲ್ ಸಂಸ್ಥೆ ”
ಈತನ ಬಿರುದ - “ಸರ್ವಜ್ಞ ಚಕ್ರವರ್ತಿ ”
ಈತನ ಇತರೆ ಬಿರುದುಗಳು - ಭೂಲೋಕಮಲ್ಲ , ತ್ರಿಭುವನ ಮಲ್ಲ

ಕಲ್ಯಾಣಿ ಚಾಲುಕ್ಯರ ಆಡಳಿತ
ಮಂತ್ರಿಗಳ ವಿಧಗಳು - “ ಪ್ರಧಾನ ” ಮತ್ತು “ ಮಹಾಪ್ರಧಾನ ”
ಪ್ರಧಾನ ಮಂತ್ರಿಗೆ ಇರುತ್ತಿದ್ದ ಬಿರುದುಗಳು “ ಚೂಡಾಮಣಿ ” ಮತ್ತು “ ಅಮಾತ್ಯ ಕೇಸರಿ ”
ಸ್ಥಳೀಯ ಆಡಳಿತ ವರ್ಗಗಳು - ಗ್ರಾಮ ಮಹತ್ತರು ಮತ್ತು ರಾಷ್ಠ್ರ ಮಹತ್ತರರು
ಆಡಳಿತದ ಕೊನೆಯ ಘಟಕ - ಗ್ರಾಮ
ಗ್ರಾಮದ ಹಿರಿಯ ಬ್ರಾಹ್ಮಣರನ್ನು “ ಮಹಾಜನ ” ಎಂದು ಕರೆಯುತ್ತಿದ್ದರು .
ವೈಶ್ಯರನ್ನು - ನಬರ ಎಂದು ಕರೆಯುತ್ತಿದ್ದರು
ಇವರ ಆಡಳಿತದಲ್ಲಿದ್ದ ಭೂಕಂದಾಯ ಲೆಕ್ಕವಿಡುತ್ತಿದ್ದ ಮುಖ್ಯಸ್ಥನ ಹೆಸರು - ಕಡಿತವರ್ಗಡೆ
ಸೈನ್ಯದ ಪ್ರಮುಖ ಕೇಂದ್ರ ಕೋಟೆಗಳು
ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ - ಶಕ್ತಿ ಪೂಜೆಯ ಕೇಂದ್ರವಾಗಿತ್ತು
ರನ್ನನಿಗೆ ಆಶ್ರಯ ನೀಡಿದವರು - ಸತ್ಯಶ್ರಾಯ ಹಾಗೂ 2 ನೇ ತೈಲಪ
ಇವರ ಕಾಲದಲ್ಲಿದ್ದ ಸುಪ್ರಸಿದ್ದ ಜೈನ ಭಕ್ತೆ - ಅತ್ತಿಮಬ್ಬೆ
ಅತ್ತಿಮಬ್ಬೆಗೆ ಇದ್ದ ಬಿರುದು - ದಾನ ಚಿಂತಾಮಣಿ
ಬಳ್ಳಿಗಾಂವೆ , ಕೋಳಿವಾಡ ಮತ್ತು ಡಂಬಳ - ಮಹಾಯಾನ ಬೌಧ್ಧರ ಕೇಂದ್ರ

ಸಾಹಿತ್ಯ ( ಕನ್ನಡ )
ರನ್ನ - ಗದಾಯುದ್ಧ ಮತ್ತು ಅಜಿತನಾಥಪುರಾಣ ( ಕವಿಚಕ್ರವರ್ತಿ ಬಿರುದು )
ಎರಡನೇ ಚಾವುಂಡರಾಯ - ಲೋಕೋಪಕಾರ
ನಾಗವರ್ಮ - ಕರ್ನಾಟಕ ಕದಂಬರಿ ಮತ್ತು ಛಂದೋಬದಿ
ಚಂದ್ರರಾಜ - ಮದನ ತಿಲಕ
ಶ್ರೀಧರಚಾರ್ಯ - ಜಾತಕ ತಿಲಕ
ಕೀರ್ತಿವರ್ಮ - ಗೋವೈದ್ಯ
ಶಾಂತಿನಾಥ - ಸುಕುಮಾರ ಚರಿತ್ರೆ
ಮಾದವರ್ಮಾಚಾರ್ಯ - ಚಂದ್ರ ಚೂಡ ಮಣಿ
ನಯನ ಸೇನ - ಧರ್ಮಾಮೃತ
ದುರ್ಗಸಿಂಹ - ಪಂಚತಂತ್ರ

ಸಂಸ್ಕೃತ ಸಾಹಿತ್ಯ
ಜಗದೇಕ ಮಲ್ಲನ ಆಸ್ಥಾನ ಕವಿ - ವಾದಿರಾಜ
6 ನೇ ವಿಕ್ರಮಾಧಿತ್ಯನ ಅಶ್ರಿತ ಕವಿ - ಬಿಲ್ಹಣ
ವಾದಿರಾಜ - ಯಶೋಧರ ಚರಿತೆ ಮತ್ತು ಪಾರ್ಶ್ವನಾಥ ಚರಿತೆ
ಬಿಲ್ಹಣ - ವಿಕ್ರಮಾಂಕ ದೇವಚರಿತ
ವಿಜ್ಞಾನೇಶ್ವರ - ಮಿತಾಕ್ಷರ ಸಂಹಿತೆ
ಮೂರನೇ ಸೋಮೇಶ್ವರ - ಮಾನಸೋಲ್ಲಾಸ
ಜಗದೇಕ ಮಲ್ಲನ - ಸಂಗೀತ ಚೂಡಾಮಣಿ

Extra Tips
ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬೀದರ್ ಜಿಲ್ಲೆಯ ಕಲ್ಯಾಣ
ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿದ ಕವಿ - ರನ್ನ
ಕನ್ನೇಗಾಲ ಕದನ ಸಂಭವಿಸಿದ್ದು - 6ನೇ ವಿಕ್ರಮಾಧಿತ್ಯ / ವಿಷ್ಣುವರ್ಧನ
ನೃತ್ಯವಿಧ್ಯಾದರಿ ಎಂಬ ಬಿರುದನ್ನು ಹೊಂದಿದ್ದವಳು - ಚಂದ್ರಲಾದೇವಿ
ಕನ್ನಡದ ಮೊದಲ ಪಶುವೈಧ್ಯ ಕೃತಿ - ಗೋವೈದ್ಯ ( ಕೀರ್ತಿವರ್ಮ )
ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ - ಜಾತಕ ತಿಲಕ ( ಶ್ರೀಧರಚಾರ್ಯ )
3 ನೇ ಸೋಮೇಶ್ವರ ನ ಬಿರುದು - ಭೂಲೋಕಮಲ್ಲ , ಸರ್ವಜ್ಞ ಚಕ್ರವರ್ತಿ ಹಾಗೂ ಸರ್ವಜ್ಞ ಭೂಪ
ಅಭಿನವ ಪಂಪ ಎಂದು ಖ್ಯಾತಿವೆತ್ತವರು - ನಾಗಚಂದ್ರಕವಿ
ಕನ್ನಡದ ಪ್ರಪ್ರಥಮ ಕವಯಿತ್ರಿ - ಕಂತಿ
ಅರಿಕೇಸರಿಯ ಆಸ್ಥಾನದ ಕವಿ - ಪಂಪ
ಸಾಹಸ ಭೀಮ ವಿಜಯ - ರನ್ನ
ಆದಿ ಕವಿ ಪಂಪ - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
ಪಂಪ ರಾಮಯಾಣ ಎಂದು ಖ್ಯಾತವಾದ ಕೃತಿ - ನಾಗ ಚಂದ್ರ ಕವಿಯ - ರಾಮಚರಿತಪುರಾಣ
ಎರಡನೇ ತೈಲಪನ ಬಿರುದು - ತ್ರೈಲೋಕ ಮಲ್ಲ
ಎರಡನೇ ತೈಲಪನ ದಂಡ ನಾಯಕ - ಬರ್ಫೆ
6ನೇ ವಿಕ್ರಮಾಧಿತ್ಯನ ದಂಡನಾಯಕ - ದಂಡಾದೀಶ
ಕನ್ನಡ ಮೊದಲ ಕಾಮಸಾಸ್ತ್ರ ಗ್ರಂಥ - ಮದನ ತಿಲಕ (ಚಂದ್ರರಾಜ )
ರನ್ನನಿಗೆ “ಕವಿಚಕ್ರವರ್ತಿ ” ಎಂಬ ಬಿರುದು ನೀಡಿದವರು - 2 ನೇ ತೈಲಪ
ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ - 3 ನೇ ತೈಲಪ
ಕಲ್ಯಾಣಿ ಚಾಲುಕ್ಯರ ಆಳ್ವಿಕೆಯನ್ನು ಕೊನೆಗಾಣಿಸಿದವರು - ಕಲಚೂರಿ ಬಿಜ್ಜಳ
ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬಿದರ್ ಜಿಲ್ಲೆಯ ಬಸವನ ಕಲ್ಯಾಣ
6 ನೇ ವಿಕ್ರಮಾಧಿತ್ಯನ ತಂದೆ ತಾಯಿ - 1 ನೇ ಸೋಮೇಶ್ವರ ಹಾಗೂ ಬಾಚಲಾ ದೇವಿ



ಕಲಾಚೂರಿಗಳು
1. ಇವರ ಮೂಲ ಪುರುಷ - ಬಿಜ್ಜಳ
2. ಇವನ ಆಸ್ಥಾನದ ಮಂತ್ರಿ - ಬಸವಣ್ಣ
3. ಬಸವಣ್ಣ ನವರನ್ನ ಶಾಸನಗಳಲ್ಲಿ “ ಮಹೇಶ್ವರ ” ಎಂದು ಕರೆಯಲಾಗಿದೆ
4. ಇವರು ಮೂಲತಃ ಬುಂದೇಲ್ ಖಂಡದವರು
5. ಬಿಜ್ಜಳನ ಬಿರುದುಗಳು - ತ್ರಿಭುವನ ಮಲ್ಲ , ಭುಜ ಬಲ ಚಕ್ರವರ್ತಿ , ಕಲಚೂರಿ ಚಕ್ರವರ್ತಿ
6. ಸೋಮೇಶ್ವರ - ಬಿಜ್ಜಳನ ಮೊದಲ ಮಗ
7. ಈತನ ಇನ್ನೋಂದು ಹೆಸರು - ಸೋಮದೇವ
8. ಸೋಮೇಶ್ವರನ ಬಿರುದು - ರಾಯಮುರಾರಿ
9. ಕಲಚೂರಿ ಪದ ಮೂಲತಃ ಬುಂದೇಲ್ ಖಂಡದ “ ಕಲಿಂಜರ್ ” ದಿಂದ ಬಂದಿದೆ
10. ಕಲಚೂರಿಗಳ ಮೂಲ ರಾಜಧಾನಿ - ಕಲಿಂಜರಿ ಪುರ
11. ಕಲಚೂರಿ ಸಾಮ್ರಾಜ್ಯದ ಸ್ಥಾಪಕ - ಎರಡನೇ ಬಿಜ್ಜಳ
12. ಕಲಚೂರಿಗಳ ಲಾಂಛನ - ನಂದಿ ( ವೃಷಭ )
13. ಬಸವೇಶ್ವರರ ಜನ್ಮ ಸ್ಥಳ - ಬಾಗೇವಾಡಿ ಅಥವಾ ಬಸವನ ಬಾಗೇವಾಡಿ
14. ಬಸವೇಶ್ವರರು ಪುನರುತ್ಥಾನಗೊಳಿಸಿದ ಮತ - ವೀರಶೈವ ಧರ್ಮ
15. ಬಸವಣ್ಣನ ಅಂಕಿತ - ಕೂಡಲ ಸಂಗಮದೇವ
16. ಕಲ್ಯಾಣ ಇರುವ ಜಿಲ್ಲೆ - ಇಂದಿನ ಬಿಜಾಪುರ
17. ಬಸವೇಶ್ವರರು ಪ್ರಚುರ ಪಡಿಸಿದ ತತ್ವ - ಶಕ್ತಿ ವಿಶಿಷ್ಟಾದ್ವೈತ
18. ಬಸವಣ್ಣನ ತಂದೆ ತಾಯಿ - ಮಾದರಸ ಮತ್ತು ಮಾದಲಾಂಬಿಕೆ
19. ಅನುಭವ ಮಂಟಪದ ಸ್ಥಾಪಕರು - ಬಸವಣ್ಣ
20. ಕಲ್ಯಾಣಿ ಕಲಚೂರ್ಯರ ವಂಶ - ಹೈಹಯ ವಂಶ , ಇವರು ಮೂಲತಃ ಇತ್ತರ ಭಾರತದವರು
21. ಕಲಚೂರ್ಯರ ಆರಂಭದ ರಾಜಧಾನಿ - ಮಂಗಳವಾಡ
22. ಬಿಜ್ಜಳನ ಸೇನಾ ದಂಡ ನಾಯಕ - ಕಸಪಯ್ಯ
23. ಬಿಜ್ಜಳನನ್ನ ಕೊಂದವರು - ಜಗದೇವದಣ್ಣಾಯಕ ಬೊಮ್ಮರಸ ಮತ್ತು ಮಲ್ಲಿದೇವ
24. ಕಲಚೂರಿಗಳ ಕೊನೆಯ ಅರಸ - ಸಿಂಘಣ

ಹೊಯ್ಸಳರು :-
25. ಹೊಯ್ಸಳ ವಂಶದ ಮೊದಲ ದೊರೆ - ಸಳ
26. ಪ್ರಾರಂಭದ ರಾಜಧಾನಿಗಳು - ಸೊಸೆವೂರು , ಬೇಲೂರು , ದ್ವಾರಸಮುದ್ರ
27. ಹಳೇಬಿಡಿನ ಪ್ರಾಚೀನ ಹೆಸರು - ದ್ವಾರ ಸಮುದ್ರ

ಆಧಾರಗಳು
28. ಜನ್ನ - ಯಶೋಧರ ಚರಿತೆ
29. ರಾಜಾಧಿತ್ಯ - ವ್ಯವಹಾರ ಗಣಿತ
30. ನಾಗಚಂದ್ರ - ರಾಮಚರಿತ ಪುರಾಣ
31. ಕೇಶಿರಾಜ - ಶಬ್ದಮಣಿ ದರ್ಪಣ

ಹೊಯ್ಸಳರ ಮೂಲ
32. ಯಾದವ ಮೂಲ
33. ತಮಿಳು ಮೂಲ
34. ಕನ್ನಡ ಮೂಲ

ರಾಜಕೀಯ ಇತಿಹಾಸ
35. ಈ ವಂಶದ ಮೊದಲ ನಾಯಕ - ಸಳ
36. ಈತನಿಗೆ ಪ್ರವಚನದ ವೇಳೆ ಇದ್ದ ಮುನಿ - ಸುದತ್ತ ಮುನಿ
37. ಹೊಯ್ಸಳರ ಲಾಂಛನ - ಹುಲಿಯನ್ನು ಕೊಲ್ಲುವ ಸಳನ ಚಿತ್ರ
38. ಸಮರ್ಥ ಗಣ್ಯ ಹೊಯ್ಸಳ ದೊರೆ - ನೃಪಕಾಮ
39. ನೃಪಕಾಮನ ನಂತರ ಅಧಿಕಾರಕ್ಕೆ ಬಂದವರು - ವಿನಯಾಧಿತ್ಯ
40. ಇವರ ರಾಜಧಾನಿ - ಸೊಸೆವೂರು
41. ರಾಜದಾನಿಯನ್ನು ಸೋಸೆಯೂರಿನಿಂದ ಹಳೇಬಿಡಿಗೆ ವರ್ಗಾಯಿಸಿದವರು - ವಿನಯಾಧಿತ್ಯ
42. ಹಳೇಬಿಡಿಗೆ ದ್ವಾರ ಸಮುದ್ರವೆಂದು ನಾಮಕರಣ ಮಾಡಿದವರು - ವಿನಯಾದತ್ಯ
43. ರಾಜಧಾನಿಯನ್ನು ಬೇಲೂರಿಗೆ ಬದಲಾಯಿಸಿದವರು - 1 ನೇ ಬಲ್ಲಾಳ

ವಿಷ್ಣುವರ್ಧನ
44. ಹೊಯ್ಸಳ ವಂಶದ ಅತ್ಯಂತ ಶ್ರೇಷ್ಠ ದೊರೆ
45. ಇವನ ಮೂಲ ಹೆಸರು - ಬಿಟ್ಟಿದೇವ
46. ಇವನು ಶ್ರೀರಾಮಾನುಜಚಾರ್ಯರಿಗೆ ಆಶ್ರಯ ನೀಡಿದನು
47. ರಾಜಧಾನಿಯನ್ನು ಬೇಲೂರಿನಿಂದ ದ್ವಾರ ಸಮುದ್ರಕ್ಕೆ ಬದಲಾಯಿಸಿದನು
48. ಅಧಿಕಾರಕ್ಕೆ ಬರುವ ಮುನ್ನ - ನಂಜನಗೂಡಿನ ಪ್ರಾಂತ್ಯಾಧಿಕಾರಿಯಾಗಿದ್ದನು
49. ಪ್ರಥಮ ದಂಡಯಾತ್ರೆಯನ್ನು ಚೋಳರ ಅಧಿವಶದಲ್ಲಿದ್ದ ಗಂಗವಾಡಿಗೆ ಹಾಕುವ ಮೂಲಕ ಆರಂಭಿಸಿದನು
50. ಈತನ ದಂಡನಾಯಕ - ಗಂಗರಾಜ
51. ಈತನ ಬಿರುದುಗಳು - ತಲಕಾಡುಗೊಂಡ , ವೀರಗಂಗ ಹಾಗೂ ಕಾಂಚಿಗೊಂಡ , ಉಚ್ಚಂಗಿಗೊಂಡ
52. ಈತನ ಪತ್ನಿ - ಚಂದ್ರಲಾದೇವಿ , ಶಾಂತಲಾದೇವಿ ಹಾಗೂ ಲಕ್ಷ್ಮೀದೇವಿ
53. ಈತನ ಉಪರಾಜಧಾನಿ - ಹಾನಗಲ್ ಹಾಗೂ ಬಂಕಾಪುರ
54. ಕ್ರಿ,ಶ.1137 ರಲ್ಲಿ “ ತುಲಾಪುರುಷ ” ಎಂಬ ಸಮಾರಂಭ ಏರ್ಪಡಿಸಿದನು
55. ಈತನ ಆಸ್ಥಾನ ಕವಿ - ಜೈನ ವಿದ್ವಾಂಸ ರಾಜಾಧಿತ್ಯ
56. ಧರ್ಮಾಮೃತ ಕೃತಿಯ ಕರ್ತೃ - ನಯನ ಸೇನ
57. “ ಅಭಿನವ ವಾಗ್ದೇವಿ ” ಎಂದು ಹೆಸರಾಗಿದ್ದವರು - ಕಂತಿ

ಎರಡನೇ ಬಲ್ಲಾಳ
58. ಹೊಯ್ಸಳ ವಂಶದ - ಎರಡನೇ ಶ್ರೇಷ್ಠ ದೊರೆ
59. ದಕ್ಷಿಣ ಚಕ್ರವರ್ತಿ - ಈತನ ಬಿರುದು
60. ಈತನನ್ನು ಹೊಯ್ಸಳ ವಂಶದ ಮೊದಲ ಸ್ವತಂತ್ರ ದೊರೆ ಎಂದು ಕರೆಯಲಾಗಿದೆ
61. ಈತನ ಬಿರುದುಗಳು - ಶನಿವಾರ ಸಿದ್ದಿ , ಗಿರಿದುರ್ಗಮಲ್ಲ , ಪಾಂಡ್ಯರಾಜ ನಿರ್ಮೂಲನ ಈ ಬಿರುದನ್ನು ಪಾಂಡ್ಯ ರನ್ನ ಸೋಲಿಸುವ ಮೂಲಕ ಪಡೆದುಕೊಂಡ
62. ಚೋಳರನ್ನ ಸದೆಬಡಿದು - “ ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ ” ಎಂಬ ಬಿರುದನ್ನ ಪಡೆದನು
63. ಈತನ ರಾಜಧಾನಿಗಳು - ದ್ವಾರಸಮುದ್ರ ಹಾಗೂ ಅರಸಿಕೆರೆ
64. ಹೊಯ್ಸಳರ ಕಾಲದಲ್ಲಿ ಅರಸಿಕೆರೆಗೆ ಇದ್ದ ಬಿರುದು - “ಭಂಡಾರ ವಾಡ ”
65. ಜನ್ನನಿಗೆ ಉಭಯ ಕವಿ ಚಕ್ರವರ್ತಿ ಎಂಬ ಬಿರುದನ್ನು ನೀಡಿದವರು - 2 ನೇ ಬಲ್ಲಾಳ
66. ಈತನ ದಂಡನಾಯಕ - ಎರೆಯಣ್ಣ
67. ಪಾಂಡ್ಯಕುಲ ಸಂರಕ್ಷಾಣ ದಕ್ಷಿಮ ಭುಜ ಎಂಬ ಬಿರುದನ್ನು ಧರಿಸಿದ್ದ ದೊರೆ - ಸೋಮೇಶ್ವರ
68. ಹೊಯ್ಸಳರ ಕೊನೆಯ ದೊರೆ - ಮೂರನೇ ಬಲ್ಲಾಳ
69. ಹಂಪೆಯ ಹತ್ತಿಯ ವಿಜಯ ವಿರೂಪಾಕ್ಷ ಪುರ ಎಂಬ ಹೊಸ ರಾಜಧಾನಿಯನ್ನು ಸ್ಥಾಪಿಸಿದ ದೊರೆ - ಮೂರನೇ ಬಲ್ಲಾಳ

ಹೊಯ್ಸಳರ ಆಡಳಿತ
70. ಗರುಡ - ರಾಜನ ವಿಶೇಷ ಅಂಗರಕ್ಷಕರು
71. ಪಂಚ ಪ್ರಧಾನ ಸಭೆ - ಹೊಯ್ಸಳರ ಮಂತ್ರಿ ಪರಿಷತ್ತು
72. ನಾಡ ಹೆಗ್ಗಡೆ - ಜಿಲ್ಲೆಯ ಮುಖ್ಯ ಅಧಿಕಾರಿ
73. ರಾಮಚರಿತ ಪುರಾಣದ ಇನ್ನೊಂದು ಹೆಸರು - ಪಂಪ ರಾಮಯಣ
74. ಕವಿತಾ ಮನೋಹರ ಎಂಬ ಬಿರುದು ಹೊಂದಿದ್ದ ಕವಿ - ನಾಗಚಂದ್ರ
75. ಕಂತಿಯು ಬರೆದ ಕೃತಿ - ಪಂಪನ ಸಮಸ್ಯೆಗಳು
76. ವಿಷ್ಣುವರ್ಧನನ ಆಸ್ಥಾನದ ಕವಿ - ರಾಜಾಧಿತ್ಯ
77. ರಗಳೆಯ ಕವಿ ಎಂದು ಪ್ರಸಿದ್ದರಾದವರು - ಹರಿಹರ
78. ಕಬ್ಬಿಗರ ಕಾವ್ಯ ಕೃತಿಯ ಕರ್ತೃ - ಆಂಡಯ್ಯ
79. ಕನ್ನಡದಲ್ಲಿ ಬ್ರಾಹ್ಮಮ ವರ್ಗದ ಮೊಟ್ಟ ಮೊದಲನೆಯ ಪ್ರಸಿದ್ದ ಕವಿ - ರುದ್ರಭಟ್ಟ
80. ರುದ್ರಭಟ್ಟನ ಕೃತಿ - ಜಗನ್ನಾಥ ವಿಜಯ
81. ಬೇಲೂರಿನ ಚೆನ್ನಕೇಶವ ದೇವಾಲಯದ ನಿರ್ಮಾತೃ - ವಿಷ್ಣುವರ್ಧನ
82. ಬೇಲೂರಿನ ಚೆನ್ನಕೇಶವ ದೇವಾಲಯದ ಅತಿ ಸುಂದರ ಕಂಬಗಳು - ನರಸಿಂಹ ಕಂಬ ಹಾಗೂ ಮೋಹಿನಿ ಕಂಬ
83. ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗ ಮೇಲ್ಛಾವಣಿಯನ್ನು - ಭುವನೇಶ್ವರಿ ಎಂದು ಕರೆಯಲಾಗಿದೆ
84. ವಾಸ್ತುಶಿಲ್ಪದ ಚಾಲುಕ್ಯ ಹೊಯ್ಸಳ ಪಂಥದ ಅತ್ಯುನ್ನತ ಸಾಧನೆ ಎಂದು ಬಣ್ಣಿಸಿರುವ ದೇವಾಲಯ - ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯ
85. ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯದ ನಿರ್ಮಾತೃ ವಿಷ್ಣುವರ್ಧನನ ದಂಡನಾಯಕ ಕೇತಮಲ್ಲ ( 1121 )
86. ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯದ ಶಿಲ್ಪಿ - ಕೇದಾರೋಜ
87. ಫರ್ಗ್ಯೂಸನ್ ರವರು ಭಾರತೀಯ ವಾಸ್ತುಶಿಲ್ಪದ ಒಂದು ರತ್ನ ಎಂದು ಬಣ್ಣಿಸಿರುವ ದೇವಾಲಯ - ಹಳೇಬಿಡಿನ ಕೇದಾರೇಶ್ವರ ದೇವಾಲಯ .
88. ಸೋಮನಾಥ ಪುರದಲ್ಲಿರುವ ಕೇಶವ ದೇವಾಲಯದ ನಿರ್ಮಾತೃ - ಮೂರನೇ ನರಸಿಂಹನ ದಂಡ ನಾಯಕ ಸೋಮನಾಥ ( ಕ್ರಿ.ಶ. 1268 ) .
89. ಬ್ರಿಟಿಷ್ ಪುರಾತತ್ವ ಇಲಾಖೆಯವರು Wedding Cake ಎಂದು ಕರೆದಿರುವ ದೇವಾಲಯ - ಸೋಮನಾಥಪುರದ ಕೇಶವ ದೇವಾಲಯ .
90. ಸೋಮನಾಥಪುರದ ಕೇಶವ ದೇವಾಲಯ - ಬಳಪದ ಕಲ್ಲಿನಲ್ಲಿ ನಿರ್ಮಾಣವಾಗಿದೆ
91. ಮೆಕ್ಕೆ ಜೋಳವನ್ನ ಕಂಡು ಹಿಡಿದವರು - ಅಮೆರಿಕಾದವರು
92. ವಿಷ್ಣುವರ್ಧನನ ರಾಣಿ - ಶಾಂತಲೆ ( ಬಿರುದು - ನೃತ್ಯವಿಶಾರದೆ )
93. ಕವಿರಾಜ ಮಲ್ಲ ಎಂದೇ ಹೆಸರಾದವರು - ನೇಮಿಚಂದ್ರ
94. ಕನ್ನಡದ ಮೊದಲ ವ್ಯಾಕರಮ ಗ್ರಂಥ - ಕೇಶಿರಾಜನ , ಶಬ್ದಮಣಿದರ್ಪಣ
95. ಆರನೇ ವಿಕ್ರಮಾಧಿತ್ಯನ ಗುರು - ವಿಜ್ಞಾನೇಶ್ವರ
96. ಬೇಲೂರಿನ ಕಪ್ಪೆ ಚೆನ್ನಿಗ ದೇವಸ್ಥಾವನ್ನ ಕಟ್ಟಿಸಿದವರು - ಶಾಂತಲೆ
97. ವಿಷ್ಣುವರ್ಧನನು ವೈಷ್ಣವ ಮತ ಸ್ವೀಕರಿಸಲು ಕಾರಣ ಕರ್ತರು - ಶ್ರೀರಾಮಾನುಜಚಾರ್ಯರು
98. ಮಲೆ ಪೆರುಳ್ ಗೊಂಡ ಎಂಬ ಬಿರುದನ್ನು ಧರಿಸಿವರು - ನೃಪಕಾಮ
99. ಒಂದನೇ ಬಲ್ಲಾಳನ ಕಾಯಿಲೆಯನ್ನು ಗುಣಪಡಿಸಿದವರು - ಚಾರು ಕೀರ್ತಿ ಪಂಡಿತ ನಂತರ ಈತನು ಬಲ್ಲಾಳನಿಂದ ಪಡೆದ ಬಿರುದು - ಜೀವರಕ್ಷಕ
100. ಕರ್ನಾಟಕ ಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದ ದೊರೆ - 2ನೇ ಬಲ್ಲಾಳ
101. ಸೋಮೇಶ್ವರನ ಆಡಳಿತ ಕೇಂದ್ರ - ಕಣ್ಣನೂರು
102. ಹೊಯ್ಸಳರ ಕುಲದೇವತೆ - ಸೊಸೆವೂರು ವಾಸಂತಿಕಾ ದೇವಿ
103. ಎರೆಯಂಗನ ಶಿಕ್ಷಾ ಗುರುಗಳು - ಜೈನ ಮುನಿ ಅಜಿತ ಸೇನಾ
104. ಹೊಯ್ಸಳರ ಕಾಲದಲ್ಲಿ ಬ್ರಾಹ್ಮಣರಿಗೆ ಕೊಟ್ಟ ಭೂಮಿಯನ್ನು - ಬ್ರಹ್ಮದೇಯ ಎಂದು ಕರೆಯಲಾಗುತ್ತಿತ್ತು
105. ಹರಿಶ್ಚಂದ್ರ ಕಾವ್ಯವನ್ನ ಬರದೆ ಕವಿ - ರಾಘವಂಕ
106. ಹೊಯ್ಸಳರು - ಯಾದವ ವಂಶಕ್ಕೆ ಸೇರಿದವರು
107. ಹಳೇಬೀಡು - ಹಾಸನ ಜಿಲ್ಲೆಯಲ್ಲಿದೆ
108. ಹೊಯ್ಸಳರ ಸೈನ್ಯಕ್ಕಿದ್ದ ಹೆಸರು - ಗರುಡ ಸೈನ್ಯ
109. ವಿಷ್ಮುವರ್ಧನನು ಮರಣ ಹೊಂದಿದ ಪ್ರದೇಶ - ಬಂಕಾಪುರ
110. ಸರಸಕವಿ ಸಾರ್ವಭೌಮ ಎಂದು ಕರೆಯಲ್ಪಡುವ ಕವಿ - ಹರಿಹರ
111. ಕರ್ನಾಟಕದಲ್ಲಿ ಹೊಯ್ಸಳರ ಪ್ರಮುಖ ಕೇಂದ್ರ - ಮೇಲುಕೋಟೆ

ಶಿವರಾಜು ತೊರೆಮನೆ

"ಗ್ರೀಕ್ ನಾಗರಿಕತೆ" 
ಶಿವರಾಜು ಟಿ.ಆರ್
ಯುರೋಪ್ ಖಂಡದಲ್ಲಿ ನಾಗರಿಕತೆಗೆ ಬುನಾದಿಯನ್ನು ಹಾಕಿದ ಮೊದಲಿಗರು - ಗ್ರೀಕರು
ಗ್ರೀಕರು ಈ ಪಂಗಡಕ್ಕೆ ಸೇರಿದವರು - ಇಂಡೋ - ಯೋರೋಪಿಯನ್
ಗ್ರೀಕರು ಈ ನದಿಯ ದಂಡೆಯ ಮೇಲೆ ಬಂದು ನೆಲೆಸಿದರು - ಡ್ಯಾನ್ಯೂಬ್
ನಗರ ರಾಜ್ಯಗಳ ಕಲ್ಪನೆಯನ್ನು ಮೊದಲು ತಂದವರು - ಗ್ರೀಕರು
ಗ್ರೀಕ್ ನ ಪ್ರಮುಖ ನಗರ ರಾಜ್ಯಗಳು - ಅಥೇನ್ಸ್ , ಸ್ಪಾರ್ಟಾ , ಹಾಗೂ ಕೊರಿಂಥ್
ಸೈನಿಕ ಶಕ್ತಿಗೆ ಹೆಸರಾದ ಗ್ರೀಕ್ ನ ನಗರ - ಸ್ಪಾರ್ಟ
ಬೌದ್ಧಿಕ ವಿಕಾಸಕ್ಕೆ ಖ್ಯಾತಿ ಪಡೆದ ನಗರ - ಅಥೆನ್ಸ್
ಈ ಶತಮಾನವನ್ನು ಗ್ರೀಕ್ ನ ಸುವರ್ಣಯುಗ ಎಂದು ಕರೆಯಲಾಗಿದೆ - ಕ್ರಿ.ಪೂ.5
ಜಗತ್ತಿನ ರಾಜ್ಯ ರಚನಾ ಇತಾಹಸದಲ್ಲಿ ಅತ್ಯಂತ ಮೇಧಾವಿ ಎಂದು ಖ್ಯಾತಿ ಪಡೆದ ವಿಧ್ವಾಂಸ - ಪೆರಿಕ್ಲಿಸ್
ಪೆರಿಕ್ಲಿಸ್ ನ ತಂದೆ ಹಾಗೂ ತಾಯಿ - ಜಾಂತಿಪಸ್ ಹಾಗೂ ಅಗರಿಸ್ತೆ ( ಅಥೆನ್ಸ್ )
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊಟ್ಟ ಮೊದಲ ಜಾರಿಗೆ ತಂದವನು - ಪೆರಿಕ್ಲಿಸ್
ಗ್ರೀಸ್ ನ ಪ್ರಸಿದ್ದ ನಾಟಕಕಾರರು - ಈಸ್ಥಿಲಸ್ , ಸೋಪೋಕ್ಲೀಸ್ ಮತ್ತು ಯೂರಿ ಪಿಡಿಸ್
ಗ್ರೀಕ್ ನ ಪ್ರಸಿದ್ದ ಇತಾಹಸಕಾರು - ಹೆರಡೋಟಸ್ ಮತ್ತು ಥುಸಿಡೈಡ್ಸ್
ಗ್ರೀಕ್ ನ ಪ್ರಸಿದ್ದ ತತ್ವಜ್ಞಾನಿಗಳು - ಸಾಕ್ರೆಟಿಸ್ ಮತ್ತು ಪ್ಲೇಟೋ
ಗ್ರೀಸ್ ನ ವಾಸ್ತುಶಿಲ್ಪದ ವೈಭವವನ್ನು ಎತ್ತಿಹಿಡಿದ ದೇವಾಲಯ - - ಪಾರ್ಥನಾನ್
ಗ್ರೀಕ್ ನ ಪ್ರಸಿದ್ದ ಶಿಲ್ಪಿಗಳು - ಫಿಡಿಯಾ ಮತ್ತು ಮೈರಾನ್
ಅಲೆಗ್ಸಾಂಡರ್ ಹರಡಿದ ಸಂಸ್ಕೃತಿಯ ಯುಗವನ್ನು ಈ ಹೆಸರಿನಿಂದ ಕರೆಯುವರು - ಹೆಲೆನಿಷ್ಟಿಕ್
ಅಲೆಗ್ಸಾಂಡರ್ ನ ದಂಡ ನಾಯಕ - ಟಾಲೆಮಿ
ಗ್ರೀಕ್ ನ ಒಕ್ಕೂಟಗಳು - ಅಥೇನ್ಸ್ ಡಿಲಿಯನ್ ಒಕ್ಕೂಟ ಮತ್ತು ಸ್ಪಾರ್ಟಾದ ಫೆಲೋಫೋನಿಷಿಯನ್ ಒಕ್ಕೂಟ
ಮ್ಯಾಸಿಡೋನಿಯಾ ಸಾಮ್ರಾಜ್ಯ ಉದಯಕ್ಕೆ ಕಾರಣ ಕರ್ತನಾದವನು - ಎರಡನೆ ಫಿಲಿಫ್
ಅಲೆಗ್ಸಾಂಡರ್ ಮ್ಯಾಸಿಡೊನಿಯದಲ್ಲಿ ಅಧಿಕಾರಕ್ಕೆ ಬಂದದ್ದು ಕ್ರಿ.ಪೂ.336
ಅಲೆಗ್ಸಾಂಡರ್ ನ ತಂದೆ - ಎರಡನೇ ಫಿಲಿಫ್
ಪರ್ಶಿಯನ್ನರ ಪವಿತ್ರ ದೇವತೆ - ಅಗ್ನಿ

ಸರ್ಕಾರದ ರಚನೆ
ಪ್ರಜಾಪ್ರಭುತ್ವ ರಚನೆ ಕಾರ್ಯರೂಪದಲ್ಲಿ ಪ್ರಯೋಗ ಮಾಡಿದ ಮೊದಲಿಗರು - ಗ್ರೀಕರು
ಅಲೆಗ್ಸಾಂಡರ್ ಈಜಿಪ್ಟ್ ನಲ್ಲಿ ನಿರ್ಮಿಸಿದ ನಗರ - ಅಲೆಗ್ಸಾಂಡ್ರಿಯಾ
ರಾಜ್ಯಗಳನ್ನು ಒಟ್ಟು ಗೂಡಿಸಿದ ಮೊದಲಿಗರು - ಗ್ರೀಕರು

ತತ್ವಶಾಸ್ತ್ರ
ತತ್ವಶಾಸ್ತ್ರಕ್ಕೆ ಕಾಣಿಕೆಯನ್ನು ಕೊಟ್ಟು ಮೊದಲ ದೇಶ - ಗ್ರೀಕ್
ಸಾಕ್ರಟಿಸ್ ಈ ನಗರ ರಜ್ಯಾದ ತತ್ವಜ್ಞಾನಿ - ಅಥೇನ್ಸ್
ಸಾಕ್ರಟಿಸ್ ನಿಗೆ ಗಲ್ಲು ಶಿಕ್ಷೆಯಾದ ವರ್ಷ ಕ್ರಿ. ಪೂ. 399
ಸಾಕ್ರಟಿಸ್ ನ ಅನನ್ಯ ಶಿಷ್ಯ - ಪ್ಲೇಟೋ
ಅಥೇನ್ಸ್ ನಲ್ಲಿ ವಿಧ್ಯಾಪೀಠವನ್ನು ಸ್ಥಾಪಿಸಿದವನು - ಪ್ಲೇಟೋ
ಪ್ಲೇಟೋನ ಪ್ರಮುಖ ಕೃತಿ - ರಿಪಬ್ಲಿಕ್ , ಸಂಭಾಷನೆ ಮತ್ತು ಅಪಾಲಜಿ
ಆದರ್ಶ ಸಮಾಜದ ರೂಪು ರೇಷೆಗಳ ಕಲ್ಪನೆಯನ್ನು ಹೊಂದಿರುವ ಪ್ಲೇಟೋವಿನ ಕೃತಿ - ರಿಪಬ್ಲಿಕ್
ಅರಿಸ್ಚಾಟಲ್ ನ ತಂದೆಯ ಹೆಸರು - ನಿಕೋಮಾಕಸ್
ಗ್ರೀಕನ ಜ್ಞಾನದ ಪಿತಮಹಾ - ಅರಿಸ್ಟಾಟಲ್
ರಾಜ್ಯಶಾಸ್ತ್ರದ ಪಿತಾಮಹಾ - ಅರಿಸ್ಟಾಟಲ್
ಇವರನ್ನು ಬುದ್ದಿವಂತ ತ್ರಿವಳಿಗಳು ಅಥವಾ ತಾತ್ವಿಕ ತ್ರಯರು ಎಂದು ಕರೆಯವರು - ಸಾಕ್ರೆಟಿಸ್ , ಪ್ಲೇಟೋ ಮತ್ತು ಅರಿಸ್ಚಾಟಲ್
ಮಾನವ ಸಂಸ್ಥೆಗಳ ವ್ಯವಸ್ಥಿತ ಅಧ್ಯನಕ್ಕೆ ಅಡಿಪಾಯ ಹಾಕಿದವರಲ್ಲಿ ಮೊದಲಿಗರು - ಪ್ಲೇಟೋ
ಪ್ಲೇಟೋರವರ ಹುಟ್ಟೂರು - ಎಜಿನಿ ನಗರ ಕ್ರಿ.ಪೂ.427
ಪ್ಲೇಟೋರವರ ನಿಜವಾದ ಹೆಸರು - ಅರಿಸ್ಟೋಕ್ಲಸ್
ಪ್ಲೇಟೋ ತಮ್ಮ ರಾಜಕೀಯ ಜೀವನವನ್ನು ಮೊದಲಿಗೆ ಆರಂಭಿಸಿ ನಗರ - ಅಥೇನ್ಸ್
ಗ್ರೀಕ್ ನ ಜ್ಞಾನ ಭಂಡಾರದ ಕೇಂದ್ರ - ಅಲೆಗ್ಸಾಂಡ್ರಿಯಾ
ಸಾಕ್ರಟಿಸ್ ಗೆ ಈ ವಿಷವನ್ನು ನೀಡಲಾಯಿತು ಹೆಮ್ ಲಾಕ್
ಪ್ರಜಾಪ್ರಭುತ್ವವನ್ನು ಗುಂಪು ಅಳ್ವಿಕೆ ಎಂದು ಕರೆದವರು - ಪ್ಲೇಟೋ
ಪ್ರಾಚೀನ ಯುಗದ ಪ್ರಪ್ರಥಮ ವಿಶ್ವವಿಧ್ಯಾಲಯ - ಕ್ರಿ.ಪೂ. 386 ರಲ್ಲಿ ಪ್ಲೇಟೋ ಸ್ಥಾಪಿಸಿದ Acadamy ಅಥವಾ ಶಾಲೆ
The republic , The statemen and The Lotus ಕೃತಿಯ ಕರ್ತೃ - ಪ್ಲೇಟೋ
ರಾಜನನ್ನು ರಾಜ್ಯದ ಹಡಗಿನ ನಾವಿಕ ಎಂದು ಕರೆದವರು - ಪ್ಲೇಟೋ
ಗ್ರೀಕ್ ನ ಪ್ರಸಿದ್ದ ಆದರ್ಶವಾದಿ ತತ್ವಜ್ಞಾನಿ - ಪ್ಲೇಟೋ
ಗ್ರೀಕ್ ನ ಪ್ರಸಿದ್ದ ವಾಸ್ತವವಾದಿ ತತ್ವಜ್ಞಾನಿ - ಅರಿಸ್ಟಾಟಲ್
ಅರಿಸ್ಟಾಟಲ್ ಜನನವಾದದ್ದು - ಕ್ರಿ.ಪೂ. 384 ರಲ್ಲಿ
ಅರಿಸ್ಟಾಟಲ್ ಜನಿಸಿದ ನಗರ - ಸ್ಟಾಗಿರ
ಅರಿಸ್ಟಾಟಲ್ ರವರ ತಂದೆಯ ಹೆಸರು - ನಿಕೋಮ್ಯಾನ್
ಪ್ಲೇಟೋರವರ ನೆಚ್ಚಿನ ಶಿಷ್ಯ - ಅರಿಸ್ಟಾಟಲ್
ಲಾಸಿಯಂ ಎಂಬ ಶಆಲೆಯನ್ನು ಸ್ಥಾಪಿಸಿದವರು - ಅರಿಸ್ಟಾಟಲ್
ನಡೆದಾಡುವ ವಿಶ್ವವಿಧ್ಯಾಲಯ ಎಂದು ಖ್ಯಾತಿ ವೆತ್ತ ತತ್ವಜ್ಞಾನಿ - ಅರಿಸ್ಟಾಟಲ್
Muses ಎಂದರೇ - ಕಲೆ , ಸಾಹಿತ್ಯ ಮತ್ತು ಜ್ಞಾನ ದೇವತೆಗಳು ಎಂದರ್ಥ


ಅರಿಸ್ಟಾಟಲ್ ರವರ ಪ್ರಮುಖ ಕೃತಿ
a. Arganan
b. The history of Animal
c. Meta Physics
d. Nicomokiyan Ethics
e. An Manarki
f. Constitution
g. On Phylosophy
h. The Politics
ರಾಜ್ಯಶಾಸ್ತ್ರ ಅಧ್ಯಯನಕ್ಕೆ ಪರಿಚಯ ಪುಸ್ತಕವಾಗಿರುವ ಅರಿಸ್ಟಾಟಲ್ ರವರ ಮೇರುಕೃತಿ - The Politics
ಪ್ರಾಚೀನ ಗ್ರೀಕ್ ನಲ್ಲಿ 158 ಸಂವಿಧಾನವನ್ನು ಜಾರಿಗೆ ತಂದವರು - ಅರಿಸ್ಟಾಟಲ್
ಅರಿಸ್ಟಾಟಲ್ ರವರು ರಾಜ್ಯಶಾಸ್ತ್ರವನ್ನು ಈ ಹೆಸರಿನಿಂದ ಕರೆದಿದ್ದಾದರೆ - ಅತ್ಯುನ್ನತ ವಿಜ್ಞಾನ ಅಥವಾ ಶ್ರೇಷ್ಠ ವಿಜ್ಞಾನ
ಅರಿಸ್ಟಾಟಲ್ ರವರನ್ನು ನೋಯಸ್ ಎಂದು ಕರೆದವರು - ಪ್ಲೇಟೋ
ನೋಯಾಸ್ ಎಂದರೇ - ಬುದ್ದಿವಂತಿಕೆಯ ಪ್ರತಿ ರೂಪ


ಸಾಹಿತ್ಯ
ಗ್ರೀಕ್ ನ ಪ್ರಸಿದ್ದ ಮಹಾ ಕಾವ್ಯಗಳು - ಇಲಿಯಡ್ ಮತ್ತು ಒಡಿಸ್ಸಿ
ಇಲಿಯಡ್ ಮತ್ತು ಒಡಿಸ್ಸಿ ಕೃತಿಯ ಕರ್ತೃ - ಹೋಮರ್
ಭಾವಗಿತೆಯಲ್ಲಿ ಓಡ್ ಶೈಲಿಯನ್ನು ಬಳಸಿದ ಗ್ರೀಕ್ ಕವಿ - ಪಿಂದಾರ
ಗ್ರೀಕ್ ಸಾಮ್ರಾಜ್ಯದ ಪ್ರಸಿದ್ದ ಕವಯಿತ್ರಿ - ಸಪ್ರೂ
ಗ್ರೀಕ್ ನ ದುರಂತ ನಾಟಕ ತ್ರಯರು - - ಈಸ್ಕಲಸ್ , ಯೂರಿಪಿಡಿಸ್ ಹಾಗೂ ಸೋಪೋಕ್ಲಿಸ್
ನಾಟಕಗಳ ತವರು ಮನೆ - ಗ್ರೀಕ್
ಗ್ರೀಕ್ ನಾಟಕದ ಬಯಲು ರಂಗಮಂದಿರದ ್ವಶೇಷಗಳು ಈ ಪ್ರದೇಶದಲ್ಲಿ ದೊರೆತಿದೆ - ಈ ಪಿಡನಸ್ ಮತ್ತು ಆಗೋವಲಸ್
ಇತಿಹಾಸದ ಪಿತಮಹಾ - ಹೆರೋಡೋಟಸ್
The parshiyan war ಕೃತಿಯ ಕರ್ತೃ - ಹೆರೋಡೋಟಸ್
ಇತಿಹಾಸ ಲೇಖನ ಕಲೆಯ ತವರು ಮನೆ - ಗ್ರೀಕ್
ಹೆರೋಡೋಟಸ್ ಈತನ ಆಸ್ಥಾನದಲ್ಲಿದ್ದನು - ಪೆರಿಕ್ಲಿಸ್
Peloponician war ಕೃತಿಯ ಕರ್ತೃ - ಥುಸಿಡೈಡ್ಸ್
Peloponician war ಕೃತಿಯ ಈ ಅಂಶಗಳನ್ನು ಒಳಗೊಂಡಿದೆ - ಸ್ಪಾರ್ಟಾ ಮತ್ತು ಅಥೇನ್ಸ್ ಒಕ್ಕೂಟದ ನಡುವಿನ ಘರ್ಷಣಿ
ಗ್ರೀಕರು ಬೆಳೆಸಿಕೊಂಡಿದ್ದ ಅತ್ಯುನ್ನತ ಪ್ರತಿಭೆ - ವಾಗ್ಮಿತ್ವ ( Oratory )
ಗ್ರೀಕ್ ನ ಪ್ರಸಿದ್ದ ವಾಗ್ಮಿ - ಡೆಮೋಸ್ಥನಿಸ್
ಪಾರ್ಸಿಗಳ ತಾಯಿನಾಡು - ಪರ್ಶಿಯಾ

ಕಲೆ ಮತ್ತು ವಾಸ್ತುಶಿಲ್ಪ
ಗ್ರೀಕ್ ದೇವಾಲಯಗಳು ಈ ಆಕರಾವನ್ನು ಹೊಂದಿದೆ - ಚತುರ್ಭಜಾಕರ
ಗ್ರೀಕ್ ನ ಕಲೆ ಮತ್ತು ವಾಸ್ತು ಶಿಲ್ಪದ ಪ್ರತೀಕ ದೇವಾಲಯ - ಅಥೇನ್ಸಿನ ಪಾರ್ಥನಾನ್ ದೇವಾಲಯ
ಗ್ರೀಕರ ಪ್ರಸಿದ್ ದೇವತೆಯ ಹೆಸರು - ಅಥೆನಾ ದೇವತೆ
ಗ್ರೀಕ್ ನ ಮಹಾ ಶಿಲ್ಪಿ ಹಾಗೂ ಚಿತ್ರ ರಚನೆಗಾರ - ಪಿಡಿಯಾಸ್
ಅಥೆನಾ ದೇವತೆಯ ಪ್ರಸಿದ್ದ ವಿಗ್ರಹವನ್ನು ರೂಪಿಸಿದವರು - ಪಿಡಿಯಾಸ್
ಕೊಳಲನ್ನು ಜಗತ್ತಿನ ಸಂಗೀತ ಕ್ಷೇತ್ರಕ್ಕೆ ನೀಡಿದವರು - ಗ್ರೀಕರು
ಭಾವಗೀತೆಯನ್ನು ಬರೆಯುವ ಕಲೆಯು ಮೊದಲು ಆರಂಭಗೊಂಡಿದ್ದು - ಗ್ರೀಕ್ ನಲ್ಲಿ
ಒಲಿಂಪಿಕ್ ಕ್ರೀಡೆಗಳನ್ನು ಆರಂಭ ಮೊಡಿದವರು - ಗ್ರೀಕರು
ಮೊದಲ ಒಲಿಂಪಿಕ್ ನಡೆದ ವರ್ಷ - ಕ್ರಿ.ಪೂ.496
ವೈದ್ಯ ವಿಜ್ಞಾನದ ಪಿತಾಮಹಾ - ಹಿಪೋಕ್ರೇಟ್ಸ್
ಹಿಪೋಕ್ರೇಟ್ಸ್ ಈ ದೇಶದವನು - ಗ್ರೀಕ್
ಪ್ರಕೃತಿ ವಿಜ್ಞಾನವನ್ನು ಬೆಳೆಸಿವನು - ಥಿಯೋಪ್ರಾಸ್ಟರ್
ಗ್ರೀಕ್ ನ ಪ್ರಸಿದ್ದ ಗಣಿತಜ್ಞರು - ಯೂಕ್ಲಿಡ್ , ಪೈಥಾಗೊರಸ್ ಮತ್ತು ಆರ್ಕಿಮಿಡ್ಸ್
ಸಾಪೇಕ್ಷ ಸಿದ್ದಾಂತದ ನಿರೂಪಕ - ಆರ್ಕಿಮಿಡಿಸ್
ಪ್ರಪಂಚದ ಭೂಪಟವನ್ನು ಭೂಮಧ್ಯೆ ರೇಖೆಯ ವ್ಯಾಸಕ್ಕನುಗುಣವಾಗಿ ಕ್ರಮಬದ್ದಗೊಳಿಸಿದವನು - ಎರಟೋಥೇನ್ಸ್
ಸೌರಮಂಡಲದ ಸ್ವರೂಪದ ಬಗ್ಗೆ ಸಿದ್ಧಾಂತವನ್ನು ಮಂಡಿಸಿದವನು - ಅರಿಸ್ಟಾಕಸ್
ಪೈಥಾಗೊರಸ್ ಜನಿಸಿದ ಸ್ಥಳ - ಸಾಮೋಸ್ ದ್ವೀಪ

Extra Tips
ಗ್ರೀಕರ ಪ್ರಮುಖ ವೃತ್ತಿ - ವಾಣಿಜ್ಯ
ಗ್ರೀಕರ ಪ್ರಮುಖ ನಿರ್ಮಾಣ ವಸ್ತುಗಳು - ಪಿಂಗಾಣಿ ಪಾತ್ರೆ , ದ್ರಾಕ್ಷಾ ಮಧ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಢಿಸಿಕೊಂಡಿದ್ದ ಗ್ರೀಕ್ ನ ನಗರ ರಾಜ್ಯ - ಸ್ಪಾರ್ಟ
ಒಲಿಂಪಿಕ್ ಆಟಗಳನ್ನು ಗ್ರೀಕರು ಮ1ದಲು ಆರಂಭಿಸಿದ್ದು - ಕ್ರಿ,ಪೂ.776
ಗ್ರೀಕರು ದೇವಾಲಯಗಳ ನಿರ್ಮಾಣದಲ್ಲಿ ಬಳಸಿದ ಶೈಲಿ - ಡೋರಿಕ್ , ಅಯೋನಿಕ್ ಹಾಗೂ ಕಾರಿಂತಿಯನ್ ಶಾಲಿ
ಈತನ ಕಾಲವನ್ನು ಅಥೇನ್ಸ್ ನಗರ ರಾಜ್ಯದ ಶ್ರೇಷ್ಠ ಕಾಲ ಎಂದು ಕರೆಯಲಾಗಿದೆ - ಪೆರಿಕ್ಲಿಸ್
ಗ್ರೀಕರ ಪ್ರಸಿದ್ದ ನಾಟಕ ದೇವತೆ - ಡಯೋನಿಶಿಯಸ್
ಗ್ರೀಕರು ನಾಟಕವಾಡುತ್ತಿದ್ದ ರಂಗ ಮಂದಿರದ ಹೆಸರು - ಅಪೆರಾ
ಗ್ರೀಕರು ದೈವಗಳ ಮುಖ್ಯಸ್ಥನನ್ನು ಈ ಹೆಸರಿನಿಂದ ಕರೆಯುವರು - ಜ್ಯೂಸ್
ಜ್ಯೂಸ್ ನ ರಾಣಿಯ ಹೆಸರು - ಹಿರಾ
ಗ್ರೀಕರ ಜ್ಞಾನ ದೇವತೆ - ಅಥಿನಿ
ಗ್ರೀಕರ ಸೂರ್ಯ ದೇವನ ಹೆಸರು - ಒಲಿಂಪಸ್
ಒಲಿಂಪಸ್ ಹೆಸರಿನಲ್ಲಿ ಆರಂಭ ಗೊಂಡ ಆಟ - ಒಲಿಂಪಿಕ್
ಆಧುನಿಕ ಯಾರೋಪ್ ಪ್ರಾಚೀನ ಗ್ರೀಸ್ ನ ಕೂಸು ಎಂದವರು - ಜವಹರಲಾಲ್ ನೆಹರು
ಪರ್ಶಿಯಾದ ಪ್ರಬಲ ದೊರೆ - ಡೇರಿಯಾಸ್
ಡೇರಿಯಸ್ ನ ಮಗನ ಹೊಸರು - ಕ್ರರಕ್ರಸ್
ಗ್ರೀಕ್ ನಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಕ್ರೀಡೆಗಳ ನಡೆಯುತ್ತಿದ್ದ ಪ್ರದೇಶ - Mount Olompus  
 


Rangadhamaiah thoremane

ಸರ್ವರೋಗ ಪರಿಹಾರಕ: ವೈದ್ಯನಾಥ ಸ್ವಾಮಿ


WD
ದೇವಸ್ಥಾನದ ಹಿರಿಯ ಗುರುಗಳು (ಅರ್ಚಕರು) ಹೇಳುವ ಪ್ರಕಾರ: ಶಿವನು ಇಲ್ಲಿ ವೈದ್ಯನಾಥನ ರೂಪದಲ್ಲಿ ಅವತರಿಸಿದ್ದಾನೆ. ಅಂಗಾರಕನ ನವಗ್ರಹ ಕ್ಷೇತ್ರವೂ ಇದಾಗಿದ್ದು, ಇಲ್ಲಿ ಚೆವ್ವ (ಕುಜ) ದೋಷ ಪರಿಹಾರವಾಗುತ್ತದೆ. ಗಣಪತಿಯು ಕಾಮಧೇನು ಮತ್ತು ಕಲ್ಪವೃಕ್ಷದಂತೆ ವರದಾಯಕನಾಗಿದ್ದಾನೆ.

ಕುಜ ದೋಷಕ್ಕೆ, ವಿವಾಹ ಸಂಬಂಧಿತ ಸಮಸ್ಯೆಗಳಿಗೆ ಮತ್ತು ಆಸ್ತಿಗೆ ಸಂಬಂಧಿಸಿದ ತೊಂದರೆಗಳಿಗೆ ಇದು ಸಿದ್ಧ ಕ್ಷೇತ್ರವಾಗಿದೆ. ಇಲ್ಲಿ ಮುರುಗ (ಷಣ್ಮುಖ)ನು ಪುತ್ರ ಭಾಗ್ಯ ಕರುಣಿಸುತ್ತಾನೆ. ತಯ್ಯಲ್‌ನಾಯಕಿ ಅಮ್ಮ ಸುಮಂಗಲಿಯರ ಔನ್ನತ್ಯಕ್ಕೆ ಕಾರಕಳಾಗಿರುತ್ತಾಳೆ.

ಈ ಕ್ಷೇತ್ರದಲ್ಲಿ ಒಂದೇ ಸಾಲಿನಲ್ಲಿ ಎಲ್ಲಾ ನವಗ್ರಹರೂ ನಿಂತಿರುವಂತಹ ವಿಗ್ರಹಗಳಿವೆ. ಆದುದರಿಂದ ಸರ್ವ ಗ್ರಹ ದೋಷವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆ.

ಬಿಲ್ವ, ಶ್ರೀಗಂಧ ಮತ್ತು ವಿಭೂತಿಯ ಮಿಶ್ರಣದ ಮೂಲಕ ದೇವರು ಎಲ್ಲ ರೋಗಗಳನ್ನೂ ಪರಿಹರಿಸುತ್ತಾನೆ. ಈ ಸ್ಥಳದಲ್ಲಿ ಎಲ್ಲಾ ನಾಲ್ಕು ಯುಗಗಳಲ್ಲಿ ಬೇರೆ ಬೇರೆಯೇ ವೃಕ್ಷಗಳಿದ್ದವು ಎಂಬ ನಂಬಿಕೆ ಇದೆ. ಅಂದರೆ ಕೃತ ಯುಗದಲ್ಲಿ ಕದಂಬ ವೃಕ್ಷ, ತ್ರೇತಾ ಯುಗದಲ್ಲಿ ಬಿಲ್ವ ವೃಕ್ಷ, ದ್ವಾಪರ ಯುಗದಲ್ಲಿ ಬಕುಳ ವೃಕ್ಷ ಹಾಗೂ ಕಲಿಯುಗದಲ್ಲಿ ಬೇವು ವೃಕ್ಷ ಇಲ್ಲಿದೆ.

ಇಲ್ಲಿನ ಸಿದ್ಧಾಮೃತ ಕೊಳವು ಆಕರ್ಷಕವಾಗಿದೆ. ಕೃತಯುಗದಲ್ಲಿ ಕಾಮಧೇನುವು ಇಲ್ಲಿಗೆ ಬಂದು ಶಿವ ಲಿಂಗಕ್ಕೆ ಕ್ಷೀರಾಭಿಷೇಕ ಮಾಡಿದ್ದು, ಉಕ್ಕಿ ಹರಿದ ಹಾಲು ಕೊಳವನ್ನು ತುಂಬಿತು, ಈ ಮೂಲಕ ಕೊಳಕ್ಕೆ ದೈವೀಕ ಶಕ್ತಿ ನೀಡಿತು ಎಂಬ ನಂಬಿಕೆಯಿದೆ. ದುಷ್ಟಶಕ್ತಿಗಳ ಬಾಧೆಗೀಡಾದ ವ್ಯಕ್ತಿಗಳು ಈ ಪವಿತ್ರ ಕೊಳದಲ್ಲಿ ಸ್ನಾನ ಮಾಡಿದರೆ, ಬಾಧೆ ನಿವಾರಣೆಯಾಗುತ್ತದೆ. ಅಲ್ಲದೆ, ವಿಶೇಷವೆಂದರೆ ಈ ಕೊಳದಲ್ಲಿ ಕಪ್ಪೆಗಳಿಲ್ಲ ಮತ್ತು ನೀರು ಹಾವುಗಳೂ ಇಲ್ಲ. ಇದಕ್ಕೆ ಕಾರಣ, ಋಷಿಯೊಬ್ಬ ತಮ್ಮ ತಪೋಬಲದ ಮೂಲಕ ಅವುಗಳು ಈ ಕೊಳದಲ್ಲಿ ಇರದಂತೆ ಮಾಡಿದ್ದ ಎನ್ನಲಾಗುತ್ತದೆ.

ಈ ಕ್ಷೇತ್ರವನ್ನು ಪುಳ್ಳಿರುಕ್ವೇಲೂರು ಅಂತಲೂ ಕರೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿನ ದೇವರನ್ನು ಪುಳ್ (ಪಕ್ಷಿ-ಜಟಾಯು), ಋಗ್ವೇದ (ರುಕ್), ಮುರುಗನ ಆಯುಧ (ವೇಲ್) ಮತ್ತು ಸೂರ್ಯ (ಊರ್) ಪೂಜಿಸಿದ್ದಾರೆ.

ವೈದ್ಯನಾಥ ಸ್ವಾಮಿಯಲ್ಲದೆ, ಈ ಕ್ಷೇತ್ರವು ನಾಡಿ ಜ್ಯೋತಿಷ್ಯಕ್ಕೂ ಅತ್ಯಂತ ಪ್ರಸಿದ್ಧಿ ಪಡೆದಿದೆ. ತಾಳೆ ಗ್ರಂಥಗಳ ಮೂಲಕ ವ್ಯಕ್ತಿಯೊಬ್ಬನ ಭೂತ, ವರ್ತಮಾನ ಮತ್ತು ಭವಿಷ್ಯಗಳನ್ನು ತಿಳಿಯಬಲ್ಲ ಈ ಶಾಸ್ತ್ರದಲ್ಲಿ ಕೇವಲ ಹೆಬ್ಬೆರಳ ಮುದ್ರೆಯ ಮೂಲಕ ಭವಿಷ್ಯ ನುಡಿಯಲಾಗುತ್ತದೆ. ಪಟ್ಟಣದ ಅಲ್ಲಲ್ಲಿ ನಾಡಿಜ್ಯೋತಿಷ್ಯ ಕೇಂದ್ರಗಳನ್ನು ನಾವು ಕಾಣಬಹುದಾಗಿದೆ.

ವೈದ್ಯೇಶ್ವರ ದೇವಾಲಯಕ್ಕೆ ಹೋಗುವುದು ಹೇಗೆ:

ರೈಲು ಮೂಲಕ : ಚೆನ್ನೈ-ತಂಜಾವೂರು ಮಾರ್ಗ ಮಧ್ಯೆ ವೈದ್ಯೇಶ್ವರ ಕೋವಿಲ್ (ದೇವಸ್ಥಾನ) ರೈಲ್ವೈ ನಿಲ್ದಾಣವಿದೆ.

ರಸ್ತೆ ಮಾರ್ಗ: ಇದು ಚೆನ್ನೈಯಿಂದ 235 ಕಿ.ಮೀ. ದೂರದಲ್ಲಿರುವ ಚಿದಂಬರಂನಿಂದ 26 ಕಿ.ಮೀ. ದೂರವಿದೆ.ಚಿದಂಬರಂನಿಂದ 35-40 ನಿಮಿಷದಲ್ಲಿ ದೇವಸ್ಥಾನ ತಲುಪಬಹುದು.

ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಚೆನ್ನೈ. ಚೆನ್ನೈಯಿಂದ ರಸ್ತೆ ಅಥವಾ ರೈಲು ಮೂಲಕ ಕ್ಷೇತ್ರ ತಲುಪಬಹುದು. ತಿರುಚ್ಚಿಯಿಂದಲೂ ಹೋಗಬಹುದು. ಆದರೆ ರಸ್ತೆ ಪ್ರಯಾಣ ಮಾತ್ರ ತ್ರಾಸದಾಯಕ.


Wednesday, November 25, 2015

ಲಾಲ್ ಬಹಾದುರ್ ಶಾಸ್ತ್ರಿ

ಲಾಲ್ ಬಹಾದುರ್ ಶಾಸ್ತ್ರಿ

ಲಾಲ್ ಬಹಾದುರ್ ಶಾಸ್ತ್ರಿ
ಲಾಲ್ ಬಹಾದುರ್ ಶಾಸ್ತ್ರಿ
ಜನನ: ಅಕ್ಟೋಬರ್ ೦೨, ೧೯೦೪
ಮರಣ: ಜನವರಿ ೧೧, ೧೯೬೬
ಜನಿಸಿದ ಸ್ಥಳ: ಮೊಘಲ್‌ಸಾರಾಯ್, ಉತ್ತರ ಪ್ರದೇಶ
ಭಾರತದ ಪ್ರಧಾನ ಮಂತ್ರಿ
Tenure Order: 2nd Prime Minister
ರಾಜಕೀಯ ಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸೇವೆ ಪ್ರಾರಂಭಿಸಿದ್ದು: ಜೂನ್ ೯, ೧೯೬೪
ಇವರ ಸೇವೆ ಕೊನೆಗೊಂಡಿದ್ದು: ಜನವರಿ ೧೧, ೧೯೬೬
Mumbai Shastri statue.jpg
Mumbai Shastri plaque.jpg
ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್ ೦೨, ೧೯೦೪ - ಜನವರಿ ೧೧, ೧೯೬೬) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು.

ಜೀವನ

  • ಲಾಲ್ ಬಹಾದುರ್ ಮೊಘಲ್‌ ಸಾರಾಯ್‌ನಲ್ಲಿ ಜನಿಸಿದ್ದು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ೧೯೨೬ ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು ೯ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ ೧೯೪೬ ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.

ಭಾರತ ಸರಕಾರಕ್ಕೆ ಸಲ್ಲಿಸಿದ ಸೇವೆ

  • ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ೦ದ ವಲ್ಲಭ ಪ೦ತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. ೧೯೫೧ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು.
  • ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‌ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ ೧೯೬೧ರಲ್ಲಿ ಗೃಹ ಮಂತ್ರಿಯಾಗಿ. ಮೇ ೨೭, ೧೯೬೪ರಂದು ಜವಾಹರ್‌ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು.
  • ಸ್ವಲ್ಪ ಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‌ನ ಕೆಲವು ಪ್ರಮುಖ ಆಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ ೯ ರಂದು ಭಾರತದ ಪ್ರಧಾನಿಯಾದರು.

ಪ್ರಧಾನಿಯಾಗಿ ಲಾಲ್ ಬಹಾದುರ್ ಶಾಸ್ತ್ರಿಗಳು

  • ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು.
  • ಜನವರಿ ೧೯೬೬ರಲ್ಲಿ ಶಾಸ್ತ್ರಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾಷ್ಕೆಂಟ್‌ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ ೧೦ ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದೇ ಟಾಶ್ಕೆಂಟ್ ಡಿಕ್ಲೆರೇಶನ್.
  • ಆದರೆ ಪಾಕಿಸ್ತಾನದವರೇ ಅವರ ಊಟದಲ್ಲಿ ವಿಷವನ್ನು ಹಾಕಿ ಕೊಂದರು. ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನ ಮಂತ್ರಿ ಹಾಗು ಈ ತರಹದ ಹಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.

ಪ್ರಾಮಾಣಿಕ, ಸ್ವಾಭಿಮಾನಿ

ಇವರು ಬಹುಶಃ ಭಾರತ ಕಂಡ ಪ್ರಧಾನಿಯಾದ ಅತ್ಯಂತ ಪ್ರಾಮಾಣಿಕ, ದಕ್ಷರಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ್, ದೇಶಾಭಿ ಮಾನ ಕೂಡ ತಲೆದೂಗುವಂತದ್ದು.

ಶಾಸ್ತ್ರಿ ಸೋಮವಾರ

  • ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು.
  • ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರ ಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ.

ಪ್ರಶಸ್ತಿಗಳು

ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ.

ಸ್ವಾತಂತ್ರ್ಯಾನಂತರ ದೇಶ ಪ್ರಗತಿ

"ಸ್ವಾತಂತ್ರ್ಯಾನಂತರ ದೇಶ ಪ್ರಗತಿ"

ಸ್ವಾತಂತ್ರ್ಯಾನಂತರ ಭಾರತ

ಸ್ವಾತಂತ್ರ್ಯಾನಂತರ ಭಾರತ 

Rangadhamaiah thoremane

ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ, ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.
ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ,ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.
ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ, ಹನುಮ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ. ಕೇಸರಿ ನಂದನ, ಹನುಮಂತ, ರಾಮದೂತ,ದಾಸರಲ್ಲಿ ಶ್ರೇಷ್ಟ. ಭಕ್ತ ಅನಜನೆಯ ಮಾರುತಿ ,ಪವನಪುತ್ರ, ಸು೦ದರ, ವಾಯುಪುತ್ರ , ರಾಮಪ್ರಿಯ, ಹನುಮ೦ತ, ಅ೦ಜನೆಯ ,ವಾನರಶ್ರೆಷ್ತೆ, ಕೆಸರಿ ನ೦ದನ ಸೂರ್ಯೋದಯ ಆದ ಸಮಯದಲ್ಲಿ ಶ್ರೀರಾಮಚಂದ್ರನ ಸರಮ ಭಕ್ತನಾದ ಹನಮಂತನು ಅವತಾರ ಮಾಡಿದ ದಿನ. ಈ ದಿನ ಬಹಳ ಮಹತ್ವದ್ದು.
ಹನುಮಂತನ ತಂದೆ ಕೇಸರಿ ಎಂಬ ಶ್ರೇಷ್ಠ ಕಪಿ, ತಾಯಿ ಅಂಜನಾದೇವಿ, ಒಳ್ಳೆಯ ಸಾಧ್ವಿ. ಅವಳು ಋಷಿಗಳ ಅನುಮತಿಯಿಂದ ಇವನನ್ನು ಪಡೆದಳು, ಆದ್ದರಿಂದ ಇವನಿಗೆ ಆಂಜನೇಯ ಎಂದು ಕರೆಯುವುದುಂಟು. ಹನುಮಂತ ದೇವರ ಸ್ಮರಣೆ ನಮಗೆಲ್ಲ ಒಂದು ವಿಶೇಷವಾದ ಶಕ್ತಿಯನ್ನು ತುಂಬಿಕೊಂಡಹಾಗೆ, ಆ ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿ. ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಅವನ ಅನೇಕ ವಿಧವಾದ ಶಕ್ತಿಯನ್ನು ನಾವು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ನಮ್ಮ ಜೀವನದಲ್ಲಿ ಎಲ್ಲ ಅವಸ್ಥೆಯಲ್ಲಿಯೂ ಅವನನ್ನು ಸ್ಮರಿಸುವುದು ಅವಶ್ಯಕ. ಶಾಸ್ತ್ರಗಳಲ್ಲಿ ಹನುಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಅನೇಕ ಬಾರಿ ಉಲ್ಲೇಖ ಇದೆ. ಅದರಲ್ಲಿ ಕೆಲವು ಈ ರೀತಿಯಾಗಿವೆ:
ಉತ್ತಮ ಬುದ್ಧಿವಂತನಾಗುವುದಕ್ಕೆ, ಶಾರೀರಿಕ ಬಲ ಮತ್ತು ಮಾನಸಿಕ ಬಲ ಇವೆರಡೂ ಬೇಕು, ಅಮ ಸಂಪಾದನೆ ಮಾಡುವುದಕ್ಕೆ, ನಾವು ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರಕುವುದಕ್ಕಾಗಿ ಮತ್ತು ಈಗಿನ ಒಂದು ದಿನದ ಪ್ರತಿ ಹಂತ ಹಂತದಲ್ಲೂ ನಮ್ಮಲ್ಲಿ ಧೈರ್ಯ ಕಡಿಮೆಯಾಗುತ್ತಲಿದೆ (ಅದಕ್ಕೆ ಕಾರಣಗಳು ಅನೇಕ, ಅದನ್ನು ಇಲ್ಲಿ ಮೆಲಕು ಹಾಕುವುದು ಬೇಡ) – ಆ ಧೈರ್ಯ ಕುಂದದೆ ಇರುವುದಕ್ಕೆ, ಭಯರಹಿತವಾದ ಜೀವನವನ್ನು ಸಾಧಿಸುವುದಕ್ಕೆ, ನಮ್ಮ ನಮ್ಮ ಧರ್ಮವನ್ನು ಆಚರಿಸದೆ ಇರುವುದಕ್ಕೆ ಕಾರಣವಾದ ನಮ್ಮಲ್ಲಿರುವ ಆಲಸ್ಯತನವು – ಅದನ್ನು ದೂರ ಮಾಡುವುದಕ್ಕೆ, ಮಾತು ಎಲ್ಲರಿಗೂ ಬೇಕು, ಅದಿಲ್ಲದೆ ಜೀವನ ಬಹಳ ಕಷ್ಟ – ಅದರ ಸಂಪಾದನೆಗೂ, ರಾಮನ ಭಕ್ತನಾದ ಹನುಮಂತ, ಆಂಜನೇಯನ ಸ್ಮರಣೆ, ಪ್ರಾರ್ಥನೆ ಇದು ಅತ್ಯಾವಶ್ಯಕ.
ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ
ಅಜಾಡ್ಯಂ ವಾಕ್ ಪಟು ತ್ವಂ ಚ ಹನುಮತ್ ಸ್ಮರಣಾತ್ ಭವೇತ್.
ಈ ಶ್ಲೋಕವನ್ನು ಎಲ್ಲರೂ ಪ್ರತಿನಿತ್ಯ ಹೇಳಬೇಕು. ಅದರಲ್ಲಿಯೂ ಹನುಮ ಜಯಂತಿಯ ದಿನ ಮರೆಯುವಹಾಗಿಲ್ಲಾ. ಕಿರಿಯರಿಂದ ಹಿಡಿದು ಮನೆಯ ಅತಿ ಹಿರಿಯರಾದವರೆಲ್ಲರೂ ಮನೆಯಿಂದ ಹೊರಡುವ ಮುಂಚೆ ಈ ಸ್ತೋತ್ರವನ್ನು ಹೇಳಿ ಹೊರಡಬೇಕು. ಇದರಿಂದ ಕಾರ್ಯಸಿದ್ಧಿ ಬೇಗ ಆಗುವುದಲ್ಲದೇ ಯಾವುದೇ ಗ್ರಹಗಳ ಭಾದೆ ಆಗುವುದಿಲ್ಲಾ. (ಹನುಮಂತನ ಸ್ಮರಣೆಯಿಂದ ಗ್ರಹಗಳ ಭಾದೆ ಆಗದೆ ಇರುವುದಕ್ಕೆ ಕಾರಣ ಏನು ಎಂಬುದನ್ನು ಆದಷ್ಟು ಬೇಗ ಇಲ್ಲಿ ತಿಳಿಸುತ್ತೇವೆ.) ಇದೆಲ್ಲದರ ಜೊತೆ ಹನುಮ ಜಯಂತಿಯ ದಿನ ಎಲ್ಲರೂ ರಾಮಪದ ಸೇವಿಪ ವೀರ ಹನುಮಂತ || ಅನುಪಲ್ಲವಿ ||
ಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿ
ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು
ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಿಲಜನ
ಪಟ್ಟಕನುವಾದ ಸಿರಿವಂತ ಹನುಮಂತ || ೧ ||
ಅಂಬರಕೆ ಪುಟನೆಗೆದು ಅಂಬುಧಿಯ ನೆರೆದಾಟಿ
ಕುಂಭಿಣಿಯ ಮಗಳಿಗುಂಗುರವನಿತ್ತೆ
ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ
ಗಂಭೀರ ವೀರಾಧಿವೀರ ಹನುಮಂತ || ೨ ||
ಅತಿ ದುರುಳ ರಕ್ಕಸನು ರಥದ ಮೇಲಿರಲು ರಘು
ಪತಿಯು ಪದಚರಿಯಾಗಿ ನಿಂತಿರಲು
ಪೃಥಿವಿ ಗಗನಕೆ ಬೆಳೆದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ವವಂತ ಹನುಮಂತ || ೩ ||
ಒಡೆಯ ಉಣಕರೆಯಲಂದಡಿಗಡಿಗೆ ಕೈ ಮುಗಿದು
ದೃಢ ಭಕುತಿಯಿಂದ ಮೌನದಲಿ ಕುಳಿತು
ಎಡೆಯ ಕೊಂಡೆದ್ದೋಡಿ ಗಗನದಲಿ ಸುರರಿಗೆ
ಕೊಡುತ ಸವಿದುಂಡ ಗುಣವಂತ ಹನುಮಂತ || ೪ ||
ಪ್ರಥಮದಲ್ಲಿ ಹನುಮಂತ ದ್ವಿತೀಯದಲ್ಲಿ ಕಲಿಭೀಮ
ತೃತೀಯದಲಿ ಗುರು ಮಧ್ವಮುನಿಯು ಎನಿಸಿ
ಪ್ರತಿಯಿಲ್ಲದೆಲೆ ಮೆರೆದೆ ಪುರಂದರವಿಠ್ಠಲನ
ಭಕ್ತ ನಿನಗಾರು ಸರಿ ವಿಜಯ ಹನುಮಂತ || ೫||ಹನುಮ ಜಯಂತಿಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುವ ವಾನರ ದೇವತೆ ಹನುಮಂತನ ಜನ್ಮದ ಸ್ಮರಣಾರ್ಥ ಆಚರಿಸಲಾಗುತ್ತದೆ. ಇದನ್ನು ಚೈತ್ರ ಮಾಸದಲ್ಲಿ ಆಚರಿಸಲಾಗುತ್ತದೆ. ರಾಮನ ದೃಢ ಭಕ್ತನಾಗಿದ್ದ ಹನುಮಂತನನ್ನು ದೇವರ ಪ್ರತಿ ಸ್ಥಿರವಾದ ಭಕ್ತಿಗಾಗಿ ಪೂಜಿಸಲಾಗುತ್ತದೆ.